ಚೆನ್ನೈ: ಐಪಿಎಲ್ 11 ನೇ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನೇ ಗೆದ್ದು ಬೀಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆ ಇದೀಗ ಆಘಾತಕಾರಿ ಸುದ್ದಿಯೊಂದು ಸಿಕ್ಕಿದೆ.ಪ್ರಮುಖ ಆಲ್ ರೌಂಡರ್ ಕೇದಾರ್ ಜಾದವ್ ಈ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಸಂಗತಿ ಚೆನ್ನೈ ಪಾಳಯದಿಂದ ಬಂದಿದೆ. ಮಂಡಿಭಾಗದ ಸ್ನಾಯುಗೆ ಗಾಯ ಮಾಡಿಕೊಂಡಿರುವ ಕೇದಾರ್ ಜಾದವ್ ಐಪಿಎಲ್ ನಿಂದ ಹೊರಬಿದ್ದಿದ್ದಾರೆ.ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಜಾದವ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದರು. ಆದರೆ ಆಗಲೇ