ಮುಂಬೈ: ಈ ಬಾರಿ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಒಂದು ರೀತಿಯಲ್ಲಿ ಕರ್ನಾಟಕಮಯವಾಗಿದೆ. ತಂಡದ ಚುಕ್ಕಾಣಿ ಕೆಎಲ್ ರಾಹುಲ್ ಹಿಡಿದರೆ ಕೋಚ್ ಆಗಿ ಅನಿಲ್ ಕುಂಬ್ಳೆ ಸಾರಥ್ಯ ವಹಿಸಲಿದ್ದಾರೆ. ರವಿಚಂದ್ರನ್ ಅಶ್ವಿನ್ ಡೆಲ್ಲಿ ತಂಡದ ಪಾಲಾದ ಮೇಲೆ ರಾಹುಲ್ ಈ ಆವೃತ್ತಿಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಬಳಿಕ ಐಪಿಎಲ್ ತಂಡವೊಂದಕ್ಕೆ ಪೂರ್ಣ ಪ್ರಮಾಣದ ನಾಯಕರಾದ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ.ವಿಶೇಷವೆಂದರೆ ಕನ್ನಡಿಗ,