ಬೆಂಗಳೂರು: ಈ ಐಪಿಎಲ್ ಕೂಟದಲ್ಲಿ ಹೀನಾಯ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.ನಿನ್ನೆ ಹೈದರಾಬಾದ್ ಸೈನ್ ರೈಸರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 146 ರನ್ ಗಳ ಸಣ್ಣ ಮೊತ್ತ ಬೆನ್ನಟ್ಟಲು ವಿಫಲವಾಗಿರುವ ಆರ್ ಸಿಬಿಗೆ 5 ರನ್ ಗಳ ಸೋಲಾಗಿದೆ. ನಾಯಕ ಕೊಹ್ಲಿ 39 ರನ್ ಗಳಿಸಿದ್ದು ಬಿಟ್ಟರೆ ಉಳಿದವರೆಲ್ಲರೂ ವಿಫಲರಾಗಿದ್ದಾರೆ.ಇದರಿಂದ ಸಿಟ್ಟಿಗೆದ್ದಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಕ್ರಿಸ್ ಗೇಯ್ಲ್ ಇದ್ದಾಗ