ಬೆಂಗಳೂರು: ನಾಳೆ ಮುಂಬೈನಲ್ಲಿ ಐಪಿಎಲ್ 11 ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಗಲಿದೆ. ಬಳಿಕ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.ಆದರೆ ಬೆಂಗಳೂರಿನ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿರುವುದು ರಾಯಲ್ ಚಾಲೆಂಜರ್ಸ್ ತಂಡ ಸೆಣಸಾಡುವುದನ್ನು. ಆರ್ ಸಿಬಿ ಪಂದ್ಯವಿರುವುದು ಭಾನುವಾರ ರಾತ್ರಿ.ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿಬಿ ತಂಡ ಭಾನುವಾರ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ಮೊದಲ ಪಂದ್ಯವಾಡಲಿದೆ. ಈ ಪಂದ್ಯ