ಮುಂಬೈ: ವೆಸ್ಟ್ ಇಂಡೀಸ್ ಕ್ರಿಕೆಟಿಗರಾದ ಡ್ವಾನ್ ಬ್ರಾವೊ ಮತ್ತು ಕಿರನ್ ಪೊಲ್ಲಾರ್ಡ್ ಬೇರೆ ಬೇರೆ ತಂಡದಲ್ಲಿ ಆಡುತ್ತಿದ್ದರೂ ಐಪಿಎಲ್ 2018 ರ ಉದ್ಘಾಟನಾ ಪಂದ್ಯದಲ್ಲಿ ಒಂದೇ ನಂ. ನ ಜೆರ್ಸಿ ಹಾಕಿಕೊಂಡು ಕಣಕ್ಕಿಳಿದಿದ್ದರು.ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದರೆ, ಪೊಲ್ಲಾರ್ಡ್ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ. ಹಾಗಿದ್ದರೂ ಇವರು 400 ನಂ.ನ ಜೆರ್ಸಿ ಹಾಕಿಕೊಂಡಿದ್ದರು. ಅದಕ್ಕೆ ಕಾರಣವನ್ನು ಬ್ರಾವೋ ಬಹಿರಂಗಪಡಿಸಿದ್ದಾರೆ.ಟಿ20 ಪಂದ್ಯಗಳಲ್ಲಿ 400 ಪಂದ್ಯಗಳನ್ನಾಡಿದ ದಾಖಲೆಯನ್ನು ಪೊಲ್ಲಾರ್ಡ್ ಮಾಡಿದರು.