ಇತ್ತೀಚೆಗೆ ಪತ್ನಿ ಉಗುರು ಬಣ್ಣ ಹಾಕಿಕೊಂಡಿದ್ದಕ್ಕೆ ಆನ್`ಲೈನ್`ನಲ್ಲಿ ಟೀಕೆಗೆ ಗುರಿಯಾಗಿದ್ದ ವೇಗಿ ಇರ್ಫಾನ್ ಪಠಾಣ್ ಇದೀಗ ರಾಖಿ ಕಟ್ಟಿಸಿಕೊಂಡು ಟೀಕೆಗಳನ್ನ ಅನುಭವಿಸುತ್ತಿದ್ದಾರೆ. ತಮ್ಮ ಕೈಗೆ ರಾಖಿ ಕಟ್ಟಿಸಿಕೊಂಡಿರುವ ಫೋಟೊವನ್ನ ಇನ್`ಸ್ಟಾಗ್ರಾಮ್`ನಲ್ಲಿ ಶೇರ್ ಮಾಡಿರುವ ಇರ್ಫಾನ್ ಪಠಾಣ್, ಅಭಿಮಾನಿಗಳಿಗೆ ರಕ್ಷಾಬಂಧನದ ಶುಭಾಷೆ.ಯ ತಿಳಿಸಿದ್ದಾರೆ. ಇಷ್ಟೇ ಸಾಕಾಯ್ತು. ಆನ್`ಲೈನ್`ನಲ್ಲಿ ಟ್ರೋಲಿಂಗ್ ಶುರುವಾಗಿದೆ. ಮುಸ್ಲಿಮನಾಗಿದ್ದುಕೊಂಡು ಹಿಂದೂ ಹಬ್ಬವನ್ನ ಆಚರಿಸಿದ್ದಾರೆ. ಇರ್ಫಾನ್ ತಂದೆ ಒಬ್ಬ ಮೌಲ್ವಿಯಾಗಿದ್ದರೂ ಇಸ್ಲಾಂ ವಿರುದ್ಧದ ಆಚರಣೆಗಳನ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇಸ್ಲಾಂ