ಕೊಲೊಂಬೊ: ಶ್ರೀಲಂಕಾ ತಂಡದ ನಾಯಕನ ಪಟ್ಟವೆನ್ನುವುದು ದುರಾದೃಷ್ಟವೇ? ಹೀಗೊಂದು ಸಂಶಯ ಈಗಿನ ವಿದ್ಯಮಾನ ನೋಡಿದರೆ ಬಲವಾಗುವುದು ಸಹಜ. ಭಾರತ ತಂಡ ಶ್ರೀಲಂಕಾಕ್ಕೆ ಕಾಲಿಟ್ಟಾಗ ಅದಾಗ ತಾನೇ ಟೆಸ್ಟ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದ ದಿನೇಶ್ ಚಂಡಿಮಾಲ್ ಜ್ವರದಿಂದ ಮೊದಲ ಪಂದ್ಯಕ್ಕೆ ಗೈರಾದರು.ಅವರ ಅನುಪಸ್ಥಿತಿಯಲ್ಲಿ ಆ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ರಂಗನಾ ಹೆರಾತ್ ಮುಂದಿನ ಪಂದ್ಯಕ್ಕಾಗುವಾಗ ಗಾಯಾಳುವಾಗಿ ಹೊರಗುಳಿದರು. ಅದೃಷ್ಟವಶಾತ್ ನಂತರದ ಪಂದ್ಯಕ್ಕೆ ಚಂಡಿಮಾಲ್ ವಾಪಸಾಗಿದ್ದರು.ಆದರೆ ಏಕದಿನ ಸರಣಿಯ ಆರಂಭದಲ್ಲೇ ನಾಯಕ