ದುಬೈ: ಟೀಂ ಇಂಡಿಯಾಗೆ ಆಯ್ಕೆಯಾಗುವ ಮೊದಲು ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಗಳಾದ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಜೋಡಿ ಐಪಿಎಲ್ ನಲ್ಲಿ ಮೋಡಿ ಮಾಡುತ್ತಿತ್ತು. ಇಬ್ಬರೂ ಫಾರ್ಮ್ ಕಳೆದುಕೊಂಡಿರುವ ಪರಿಣಾಮ ಮುಂಬೈ ತಂಡವೇ ಕಳೆಗುಂದಿದೆ. ಇದರ ಬಗ್ಗೆ ಮಾತನಾಡಿರುವ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಟೀಂ ಇಂಡಿಯಾಗೆ ಆಯ್ಕೆಯಾದ ಮೇಲೆ ಇಬ್ಬರೂ ಗಾಂಭೀರ್ಯವಾಗಿಲ್ಲ, ಆರಾಮವಾಗಿದ್ದಾರೆ ಎಂದು ಆರೋಪಿಸಿದ್ದಾರೆ.‘ಟೀಂ ಇಂಡಿಯಾ ಕ್ಯಾಪ್ ಸಿಕ್ಕ ಮೇಲೆ ಇಬ್ಬರೂ ಆರಾಮವಾಗಿದ್ದಾರೆ. ತಮ್ಮ ಹೊಡೆತಗಳ