ಸೌಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಗಾಯಮಾಡಿಕೊಂಡಿದ್ದಾರೆ.ಬಲಗೈಗೆ ಗಾಯ ಮಾಡಿಕೊಂಡಿರುವ ವೇಗಿಗೆ ಈಗ ಸ್ಟಿಚ್ ಹಾಕಲಾಗಿದೆ. ಇದರಿಂದಾಗಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಾರಾ ಎಂದು ಇನ್ನಷ್ಟೇ ತಿಳಿಯಬೇಕಿದೆ.ಹಾಗಿದ್ದರೂ ಗಾಯ ಗಂಭೀರವಲ್ಲ, 10 ದಿನಗಳಲ್ಲಿ ಸ್ಟಿಚ್ ತೆಗೆಯಲಾಗುತ್ತದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಹಾಗಿದ್ದರೂ ಸದ್ಯದ ಮಟ್ಟಿಗೆ ಅವರು ಅಭ್ಯಾಸ ತಪ್ಪಿಸಿಕೊಳ್ಳಲಿದ್ದಾರೆ. ಒಂದು ವೇಳೆ ಇಶಾಂತ್ ಅಲಭ್ಯರಾದರೆ ಮೊಹಮ್ಮದ್