ಬೆಂಗಳೂರು: ಗಾಯದಿಂದ ಚೇತರಿಸಿಕೊಂಡು ಕೆಲವೇ ದಿನಗಳಲ್ಲಿ ಮತ್ತೆ ಇಶಾಂತ್ ಶರ್ಮಾ ಗಾಯದ ಗೂಡು ಸೇರಿರಿಕೊಂಡಿರುವುದರಿಂದ ಎನ್ ಸಿಎ ಕಾರ್ಯವೈಖರಿ ಮೇಲೆ ಅನುಮಾನಪಡುವಂತಾಗಿದೆ. ರಾಹುಲ್ ದ್ರಾವಿಡ್ ಅಧ್ಯಕ್ಷರಾದ ಬಳಿಕ ಎನ್ ಸಿಎನಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಕೂಡಾ ಇದೇ ರೀತಿಯಲ್ಲಿ ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾದಾಗ ಭಾರೀ ವಿವಾದವಾಗಿತ್ತು. ಎನ್ ಸಿಎ ತಪಾಸಣೆ ರೀತಿಯೇ ಸರಿಯಿಲ್ಲ ಎಂಬ