ಮುಂಬೈ: ಟೀಂ ಇಂಡಿಯಾದಲ್ಲಿ ಇತ್ತೀಚೆಗೆ ಪೂರ್ಣ ಪ್ರಮಾಣದ ತಂಡ ಒಂದು ಟೂರ್ನಿ ಆಡುವುದು ಎಂದೇ ಇಲ್ಲ. ಪ್ರತೀ ಸರಣಿಗೂ ಹಿರಿಯ ಆಟಗಾರರಿಗೆ ಸರತಿಯಂತೆ ವಿಶ್ರಾಂತಿ ನೀಡಲಾಗುತ್ತಿದೆ.ಈ ನಿರ್ಧಾರದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ. ಇನ್ನು ಕೆಲವರು ಇದರಿಂದ ಸಾಕಷ್ಟು ಯುವ ಆಟಗಾರರಿಗೆ ಅವಕಾಶ ಸಿಕ್ಕಿದಂತಾಗಿದೆ ಎಂದು ಹೊಗಳಿದ್ದೂ ಇದೆ.ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿರುವ ಟೀಂ ಇಂಡಿಯಾದಲ್ಲಿ ಬಹುತೇಕ ಹಿರಿಯ ಆಟಗಾರರಿಗೆ ರೆಸ್ಟ್ ನೀಡಲಾಗಿದೆ.