ಮುಂಬೈ: ಟೀಂ ಇಂಡಿಯಾ ಜುಲೈನಲ್ಲಿ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಆಡಲಿದ್ದು, ಈ ಸರಣಿಗೆ ಆಂಗ್ಲರ ಪ್ರಮುಖ ವೇಗಿ ಜೇಮ್ಸ್ ಆಂಡರ್ಸನ್ ಈಗಲೇ ತಯಾರಿ ಆರಂಭಿಸಿದ್ದಾರೆ.ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ವಿಕೆಟ್ ಪಡೆದಿರುವ ಆಂಡರ್ಸನ್ ಈ ಸರಣಿಯಲ್ಲಿ ಪ್ರಮುಖ ಆಟಗಾರರಾಗಿದ್ದಾರೆ. ಹೀಗಾಗಿ ಪ್ರವಾಸಿ ಭಾರತ ತಂಡಕ್ಕೆ ಮೂಗುದಾರ ಹಾಕಲು ಆಂಡರ್ಸನ್ ಸಿದ್ಧತೆ ನಡೆಸಿದ್ದಾರೆ.ಈ ಸರಣಿಗೆ ಮೊದಲು ಆರು ವಾರಗಳ ವಿಶ್ರಾಂತಿ ಪಡೆಯಲಿರುವ ಆಂಡರ್ಸನ್ ಸಂಪೂರ್ಣವಾಗಿ ಫಿಟ್ ಆಗಿರಲು