ಜಸ್ಪ್ರೀತ್ ಬುಮ್ರಾಗೆ ಗಾಯ, ಸ್ಕ್ಯಾನಿಂಗ್ ವರದಿಗೆ ಕಾಯುತ್ತಿರುವ ಮಯಾಂಕ್!

ಸಿಡ್ನಿ| Krishnaveni K| Last Modified ಮಂಗಳವಾರ, 12 ಜನವರಿ 2021 (09:50 IST)
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾದಲ್ಲಿ ಅರ್ಧಕ್ಕಿಂತ ಹೆಚ್ಚು ಗಾಯಾಳುಗಳೇ ಇದ್ದಾರೆ. ಇದೀಗ  ಆ ಗಾಯಾಳುಗಳ ಲಿಸ್ಟ್ ಗೆ ಹೊಸ ಸೇರ್ಪಡೆಯಾಗಿದೆ.  
> ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಗಾಯಗೊಂಡಿದ್ದು, ಬ್ರಿಸ್ಬೇನ್ ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಕೆಳಹೊಟ್ಟೆಯ ನೋವಿಗೊಳಗಾಗಿರುವ ಬುಮ್ರಾ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ‍್ಯತೆಯಿದೆ. ಇನ್ನು, ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಕೂಡಾ ಅಭ್ಯಾಸದ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದು, ಸ್ಕ್ಯಾನಿಂಗ್ ವರದಿಗಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಅವರು ಫಿಟ್ ಆದರೆ ಈಗಾಗಲೇ ಸ್ನಾಯು ಸೆಳೆತಕ್ಕೊಳಗಾಗಿರುವ ಹನುಮ ವಿಹಾರಿ ಸ್ಥಾನಕ್ಕೆ ಆಡಲಿಳಿಯಲಿದ್ದಾರೆ.>


ಇದರಲ್ಲಿ ಇನ್ನಷ್ಟು ಓದಿ :