ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕರಾಗಿರುವ ಜಸ್ಪ್ರೀತ್ ಬುಮ್ರಾ ಟಾಸ್ ವೇಳೆ ಕಮೆಂಟೇಟರ್ ಮಾರ್ಕ್ ಬುಚರ್ ಗೆ ತಿಳಿಸಿ ಹೇಳಿದ ಘಟನೆ ನಡೆದಿದೆ.ಈ ಪಂದ್ಯದ ಮೂಲಕ ಬುಮ್ರಾ 35 ವರ್ಷಗಳ ಬಳಿಕ ವೇಗಿಯೊಬ್ಬರು ಭಾರತ ತಂಡದ ನಾಯಕತ್ವ ವಹಿಸಿದ ದಾಖಲೆ ಮಾಡಿದರು. ಇದಕ್ಕೆ ಮೊದಲು ಕಪಿಲ್ ದೇವ್ ಈ ಸಾಧನೆ ಮಾಡಿದ್ದರು.ಆದರೆ ಟಿವಿ ಸಂದರ್ಶಕರಾಗಿರುವ ಮಾರ್ಕ್ ಬುಚರ್ ನೀವು ಮೊದಲ ವೇಗಿ ಎಂದು ಪ್ರಶಂಸಿಸಿದರು.