ಮುಂಬೈ: ಪದೇ ಪದೇ ಗಾಯಗೊಂಡು ತಂಡದಿಂದ ಹೊರಗುಳಿಯುತ್ತಿರುವ ಟೀಂ ಇಂಡಿಯಾ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾರನ್ನು ಪಾಕ್ ಕ್ರಿಕೆಟಿಗ ಸಲ್ಮಾನ್ ಬಟ್ ಫೆರಾರಿ ಕಾರಿಗೆ ಹೋಲಿಸಿದ್ದಾರೆ.ಬುಮ್ರಾ ಫೆರಾರಿ ಕಾರಿನಂತೆ. ಅವರನ್ನು ನಾಜೂಕಾಗಿ ನಿಭಾಯಿಸಬೇಕು ಎಂದು ಸಲ್ಮಾನ್ ಬಟ್ ಅಭಿಪ್ರಾಯಪಟ್ಟಿದ್ದಾರೆ.ಮತ್ತೆ ಬೆನ್ನು ನೋವಿಗೊಳಗಾಗಿರುವ ಬುಮ್ರಾ ಈಗ ವಿಶ್ವಕಪ್ ಗೆ ತಂಡಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಹೀಗಾಗಿ ಅವರನ್ನು ದುಬಾರಿ ಕಾರು ಫೆರಾರಿಯಂತೆ ನಾಜೂಕಾಗಿ ನಿಭಾಯಿಸಿದರೆ ಮಾತ್ರ ತಂಡದಲ್ಲಿ ಉಳಿಸಿಕೊಳ್ಳಬಹುದು ಎಂದು ಸಲ್ಮಾನ್ ಹೇಳಿದ್ದಾರೆ.