Photo Courtesy: Twitterಮುಂಬೈ: ಬೆನ್ನು ನೋವಿನಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿರುವ ವೇಗಿ ಜಸ್ಪ್ರೀತ್ ಬುಮ್ರಾ ಈಗ ಚೇತರಿಸಿಕೊಂಡಿದ್ದಾರೆ.ಬೆಂಗಳೂರಿನ ಎನ್ ಸಿಎನಲ್ಲಿ ಬುಮ್ರಾ ಬೌಲಿಂಗ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ತಾನೀಗ ಕ್ರಿಕೆಟ್ ಕಣಕ್ಕೆ ಮರಳಲು ಸಿದ್ಧನಾಗಿರುವುದಾಗಿ ಹೇಳಿದ್ದಾರೆ.ಆದರೆ ಬುಮ್ರಾರ ವಿಡಿಯೋ ನೋಡಿದ ನೆಟ್ಟಿಗರು, ನಿಮಗೆ ಟೀಂ ಇಂಡಿಯಾಗಿಂತ ಐಪಿಎಲ್ ಗೆ ಮರಳುವುದೇ ಮುಖ್ಯ ಎನಿಸುತ್ತಿದೆ ಎಂದು ಟೀಕೆ ಮಾಡಿದ್ದಾರೆ. ಇನ್ನೇನು ಐಪಿಎಲ್ ಆರಂಭವಾಗಲು ಕೆಲವೇ ತಿಂಗಳು ಬಾಕಿಯಿದ್ದು ಆಗಲೇ ಬುಮ್ರಾ ಚೇತರಿಸಿಕೊಳ್ಳಬಹುದು.