ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಕನಸಿನಲ್ಲಿದ್ದ ಟೀಂ ಇಂಡಿಯಾಗೆ ಶಾಕ್ ಕಾದಿತ್ತು. ಪಂದ್ಯ ಡ್ರಾ ಆಗಿ ನಿರಾಸೆ ಅನುಭವಿಸಿತು.ದ್ವಿತೀಯ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ದಿನದಾಟ ಮುಗಿಸಿತು. ಭಾರತದ ಮೂಲದವರೇ ಆದ ರಚಿನ್ ಜಿಗುಟಿನ ಆಟದಿಂದಾಗಿ ಗೆಲುವಿನ ಕನಸು ಭಗ್ನವಾಯಿತು. ಬರೋಬ್ಬರಿ 91 ಎಸೆತ ಎದುರಿಸಿದ ರಚಿನ್ ಗಳಿಸಿದ್ದು 18 ರನ್. ಅವರಿಗೆ ಸಾಥ್ ನೀಡಿದ