Widgets Magazine

ಮಂದ ಬೆಳಕಿನಿಂದಾಗಿ ತಡವಾದ ಕರ್ನಾಟಕ-ಜಮ್ಮು ರಣಜಿ ಕ್ವಾರ್ಟರ್ ಫೈನಲ್

ಬೆಂಗಳೂರು| Krishnaveni K| Last Modified ಗುರುವಾರ, 20 ಫೆಬ್ರವರಿ 2020 (10:10 IST)
ಜಮ್ಮು ಕಾಶ್ಮೀರ: ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ನ ಕ್ವಾರ್ಟರ್ ಫೈನಲ್ ಪಂದ್ಯ ಮಂದ ಬೆಳಕಿನ ಕಾರಣದಿಂದ ತಡವಾಗಿ ಆರಂಭವಾಗಲಿದೆ.

 
ಜಮ್ಮುವಿನಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ವಿಪರೀತ ಗಾಳಿ, ಮಂದ ಬೆಳಕು ಅಡ್ಡಿಯಾಗಿದೆ. ಅಷ್ಟೇ ಅಲ್ಲದೆ ನಿನ್ನೆ ರಾತ್ರಿ ಹನಿ ಮಳೆಯಾಗಿರುವುದರಿಂದ ಮೈದಾನ ಸಿಬ್ಬಂದಿ ಪಂದ್ಯಕ್ಕೆ ಮೈದಾನ ತಯಾರುಗೊಳಿಸಲು ಹರಸಾಹಸ ಪಡುವಂತಾಗಿದೆ.
 
ಉಳಿದಂತೆ ಇನ್ನೊಂದೆಡೆ ಗುಜರಾತ್-ಗೋವಾ ಮತ್ತು ಬಂಗಾಳ-ಒಡಿಶಾ ಹಾಗೂ ಸೌರಾಷ್ಟ್ರ-ಆಂಧ್ರಪ್ರದೇಶ ನಡುವೆ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುತ್ತಿವೆ.
ಇದರಲ್ಲಿ ಇನ್ನಷ್ಟು ಓದಿ :