ರಾಜ್ ಕೋಟ್: ಕರ್ನಾಟಕ ಮತ್ತು ಸೌರಾಷ್ಟ್ರ ತಂಡಗಳ ನಡುವೆ ರಾಜ್ ಕೋಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯ ಇಂದು ಹಲವು ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಆದರೆ ಅಂತಿಮವಾಗಿ ಕರ್ನಾಟಕ 87 ರನ್ ಗಳಿಂದ ಸೋಲನುಭವಿಸಿತು.ದ್ವಿತೀಯ ಇನಿಂಗ್ಸ್ ನಲ್ಲಿ ಸೌರಾಷ್ಟ್ರವನ್ನು ಕೇವಲ 79 ರನ್ ಗಳಿಗೆ ಆಲೌಟ್ ಮಾಡಿದ ಕರ್ನಾಟಕ ಹುಡುಗರ ಕರಾಮತ್ತು ನೋಡಿ ಇಂದೇ ರಾಜ್ಯದ ತಂಡ ಪಂದ್ಯ ಗೆಲ್ಲುತ್ತದೇನೋ ಎಂಬ ಆಸೆ ಚಿಗುರಿತ್ತು. ಕರುಣ್ ನಾಯರ್ ಮತ್ತು