ಬೆಳಗಾವಿ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಪಂದ್ಯದಲ್ಲೂ ಕರ್ನಾಟಕ ಡ್ರಾಕ್ಕೆ ತೃಪ್ತಿ ಪಟ್ಟುಕೊಂಡಿದೆ. ಮುಂಬೈ ವಿರುದ್ಧ ಆಡಿದ ದ್ವಿತೀಯ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆಯಿಂದಾಗಿ ಹೆಚ್ಚುವರಿ ಅಂಕ ಗಳಿಸಿದ ಸಮಾಧಾನ ಕರ್ನಾಟಕಕ್ಕೆ ಸಿಕ್ಕಿತು.ಅಂತಿಮ ದಿನವಾದ ಇಂದು ಕರ್ನಾಟಕ ದ್ವಿತೀಯ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ ನ 195 ರನ್ ಗಳ ಮುನ್ನಡೆ ಹೊಂದಿದ್ದ ಕರ್ನಾಟಕ ಮುಂಬೈಗೆ ಒಟ್ಟು