ದೇಶೀಯ ಟಿ20ಗೆ ಕರ್ನಾಟಕವೇ ದೊರೆ! ಚೊಚ್ಚಲ ಚಾಂಪಿಯನ್ ಆದ ರಾಜ್ಯದ ಹುಡುಗರು

ಇಂಧೋರ್, ಶುಕ್ರವಾರ, 15 ಮಾರ್ಚ್ 2019 (09:37 IST)

ಇಂಧೋರ್: ಮಹಾರಾಷ್ಟ್ರ ವಿರುದ್ಧ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ ಚೊಚ್ಚಲ ಚಾಂಪಿಯನ್ ಆಗಿದೆ.


 
ಟೂರ್ನಿಯ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕರ್ನಾಟಕ ಫೈನಲ್ ಪಂದ್ಯದಲ್ಲೂ ಅದನ್ನೇ ಮುಂದುವರಿಸಿದೆ. ಮಹಾರಾಷ್ಟ್ರ ನೀಡಿದ್ದ 155 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ರಾಜ್ಯ ತಂಡ 18.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 159 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಕರ್ನಾಟಕ ಪರ ರೋಹನ್ ಕದಂ 60 ಮತ್ತು ಮಯಾಂಕ್ ಅಗರ್ವಾಲ್ 85 ರನ್ ಸಿಡಿಸಿದರು.
 
ಈ ಮೂಲಕ ದೇಶೀಯ ಟಿ20 ಟೂರ್ನಿಯಲ್ಲಿ ಅಗ್ರ ಟೂರ್ನಿಯಾಗಿರುವ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದು ಬೀಗಿದೆ. ಈಗಾಗಲೇ 8 ಬಾರಿ ರಣಜಿ ಟ್ರೋಫಿ ಗೆದ್ದಿರುವ ರಾಜ್ಯ ತಂಡ 6 ಬಾರಿ ಇರಾನಿ ಟ್ರೋಫಿ ಪ್ರಶಸ್ತಿಯನ್ನೂ ಪಡೆದ ಹೆಗ್ಗಳಿಕೆ ಹೊಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಸೌರವ್ ಗಂಗೂಲಿ

ನವದೆಹಲಿ: ಈ ಬಾರಿಯ ಐಪಿಎಲ್ ನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ...

news

ಕೋಚ್ ಗಿಂತಲೂ ಹೆಚ್ಚು ಕ್ರಿಕೆಟಿಗ ರಿಷಬ್ ಪಂತ್ ಫೋನ್ ನಲ್ಲಿ ಯಾರ ಜತೆಗೋ ಮಾತಾಡ್ತಾರಂತೆ!

ನವದೆಹಲಿ: ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಟೀಂ ಇಂಡಿಯಾದಲ್ಲಿ ಆಡುವಾಗ ಕೋಚ್, ನಾಯಕನ ...

news

ಸರಣಿ ಸೋತ ಬಳಿಕ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಪರಿಸ್ಥಿತಿ ಹೇಗಿದೆ ಗೊತ್ತಾ?!

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಟಿ20 ಬಳಿಕ ಏಕದಿನ ಸರಣಿಯನ್ನೂ ಸೋತ ಬಳಿಕ ಟೀಂ ಇಂಡಿಯಾ ಆಟಗಾರರು ...

news

ಸೋಲಿನ ಸುಳಿಯಲ್ಲಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ದಿಡೀರ್ ಆಗಿ ಪ್ರಬಲವಾಗಿದ್ದು ಹೇಗೆ ಗೊತ್ತಾ?!

ನವದೆಹಲಿ: ಒಂದು ಕಾಲದಲ್ಲಿ ವಿಶ್ವದ ಎಲ್ಲಾ ತಂಡಗಳಿಗೂ ಕಬ್ಬಿಣದ ಕಡಲೆಯಾಗಿದ್ದ ಆಸ್ಟ್ರೇಲಿಯಾ ತಂಡ ಕಳೆದ ...