ನವದೆಹಲಿ: ಮುಂಬೈ ವಿರುದ್ಧ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ 72 ರನ್ ಗಳಿಂದ ಸೋತು ಕೂಟದಿಂದ ಹೊರಬಿದ್ದಿದೆ.ಮುಂಬೈ ಮೊದಲು ಬ್ಯಾಟಿಂಗ್ ಮಾಡಿ 49.2 ಓವರ್ ಗಳಲ್ಲಿ 332 ರನ್ ಗಳಿಗೆ ಆಲೌಟ್ ಆಯಿತು. ಮುಂಬೈ ಪರ ಭರ್ಜರಿ ಶತಕ ಗಳಿಸಿದ ಪೃಥ್ವಿ ಶಾ ಅಬ್ಬರದ ಮುಂದೆ ಕರ್ನಾಟಕ ಸೋತು ಹೋಯಿತು. ಪೃಥ್ವಿ 165 ರನ್ ಚಚ್ಚಿದರು.ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕರ್ನಾಟಕ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು.