ಬೆಂಗಳೂರು: ವಿಶಾಖಪಟ್ಟಣದಲ್ಲಿ ಇಂದು ತಮಿಳುನಾಡು ಕರ್ನಾಟಕ ಕಾದಾಟ ನಡೆಯಲಿದೆ. ಗಾಬರಿಯಾಗಬೇಕಿಲ್ಲ. ಈ ಕಾದಾಟ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಹಣಾಹಣಿಯದ್ದು.ಈಗಾಗಲೇ ಬಿ ಗುಂಪಿನಿಂದ ಅಗ್ರ ಸ್ಥಾನಿಯಾಗಿ ಬಂದಿರುವ ಕರ್ನಾಟಕ ನಾಕೌಟ್ ಹಂತಕ್ಕೆ ಮೊದಲು ಆತ್ಮವಿಶ್ವಾಸದಲ್ಲಿದೆ. 2014 ನೇ ಸಾಲಿನಲ್ಲಿ ಕರ್ನಾಟಕ ರಣಜಿ ಟ್ರೋಫಿ ಗೆದ್ದ ಮೇಲೆ ಇದೇ ಮೊದಲ ಬಾರಿಗೆ ಉಭಯ ತಂಡಗಳು ಪರಸ್ಪರ ಸೆಣಸಾಡುತ್ತಿವೆ. ಕಳೆದ ಋತುವಿನಲ್ಲಿ ಇಬ್ಬರೂ ನಾಕೌಟ್ ಹಂತದಲ್ಲಿ ಸೋತಿದ್ದವು. ಹಾಗಾಗಿ ಇದು ಒಂಥರಾ ಸಮಬಲದ