ಮುಂಬೈ: ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೇದಾರ್ ಜಾಧವ್ ಐಪಿಎಲ್ ಪಂದ್ಯದ ನಡುವೆ ಗಾಯಗೊಂಡು ಈಗ ಸಂಕಷ್ಟಕ್ಕೀಡಾಗಿದ್ದಾರೆ.ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಜಾಧವ್ ಮೇ 5 ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಭುಜದ ನೋವಿಗೆ ತುತ್ತಾಗಿ ತಕ್ಷಣವೇ ಪೆವಿಲಿಯನ್ ಗೆ ಮರಳಿದ್ದರು.ಇದೀಗ ಅವರು ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದು, ಮೇ 23 ರೊಳಗಾಗಿ ಫಿಟ್ ಆದರೆ ಮಾತ್ರವೇ ವಿಶ್ವಕಪ್ ಆಡಬಹುದಾಗಿದೆ.