ಬಿಸಿಸಿಐನಿಂದ ಅಜೀವ ನಿಷೇಧಕ್ಕೊಳಗಾಗಿದ್ದ ಕ್ರಿಕೆಟಿಗ ಎಸ್. ಶ್ರೀಶಾಂತ್`ಗೆ ಕೇರಳ ಹೈಕೋರ್ಟ್ ರಿಲೀಫ್ ನೀಡಿದೆ. ಅಜೀವ ನಿಷೇಧ ತೆರವುಗೊಳಿಸಿ ಹೈಕೋರ್ಟ್ ಆದೇಶಿಸಿದೆ. 2013ರಲ್ಲಿ ಐಪಿಎಲ್ ಸರಣಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿದ್ದ ಶ್ರೀಶಾಂತ್, ಬಂಧನಕ್ಕೊಳಗಾಗಿ ಬಳಿಕ ರಿಲೀಸ್ ಆಗಿದ್ದರು. ಬಳಿಕ ಬಿಸಿಸಿಐ ಶ್ರೀಶಾಂತ್`ಗೆ ಕ್ರಿಕೆಟ್`ನಿಂದ ಅಜೀವ ನಿಷೇಧ ಹೇರಿತ್ತು. ಇದನ್ನ ಪ್ರಶ್ನಿಸಿ ಶ್ರೀಶಾಮತ್ ಮಾರ್ಚ್`ನಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಶ್ರೀಶಾಂತ್`ಗೆ ರಿಲೀಫ್ ಕೊಟ್ಟಿದೆ. ಬಿಸಿಸಿಐ ನಿಷೇಧ ಆದೇಶವನ್ನ