Photo Courtesy: Twitterಡೊಮಿನಿಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಅದಾದ ಬಳಿಕ ಏಕದಿನ ಸರಣಿ ಆರಂಭವಾಗಲಿದೆ.ಈ ಎರಡೂ ಸರಣಿಗಳಲ್ಲಿ ಕಿಂಗ್ ಕೊಹ್ಲಿ ಆಡಲಿದ್ದಾರೆ. ಪ್ರತೀ ಬಾರಿ ಕೊಹ್ಲಿ ಕಣಕ್ಕಿಳಿದಾಗ ಒಂದಿಲ್ಲೊಂದು ದಾಖಲೆಯಾಗೇ ಆಗುತ್ತದೆ. ಈ ಬಾರಿಯೂ ವಿಂಡೀಸ್ ಪ್ರವಾಸದಲ್ಲಿ ಅವರು ಮೂರು ದಾಖಲೆಗಳನ್ನು ಮಾಡುವ ಸಾಧ್ಯತೆಯಿದೆ.ಈ ಸರಣಿಯಲ್ಲಿ ಅವರು ಒಂದು ಶತಕ ಗಳಿಸಿದರೂ ವಿಂಡೀಸ್ ವಿರುದ್ಧ ಗರಿಷ್ಠ ಶತಕ ಗಳಿಸಿದ ದಾಖಲೆ ಮಾಡಲಿದ್ದಾರೆ.