ಮುಂಬೈ: ಕಿಂಗ್ಸ್ ಪಂಜಾಬ್ ನಾಯಕರಾಗಿ ಕೆಎಲ್ ರಾಹುಲ್ ಮುಂದಿನ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ.ಐಪಿಎಲ್ 14 ಮುಗಿದ ಬಳಿಕ ರಾಹುಲ್ ಮಾಡಿದ್ದ ಟ್ವೀಟ್ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಕಿಂಗ್ಸ್ ಪಂಜಾಬ್ ತನ್ನ ನಾಯಕನ ಬಗ್ಗೆ ನೀಡಿರುವ ಪರೋಕ್ಷ ಟಾಂಗ್ ಆ ಸುದ್ದಿಗೆ ಮತ್ತಷ್ಟು ಬಲ ನೀಡಿದೆ.ರಾಹುಲ್ ತಂಡ ಬಿಡುವ ಬಗ್ಗೆ ಟಾಂಗ್ ಕೊಟ್ಟಿರುವ ಪಂಜಾಬ್ ಮಾಲಿಕ ನೆಸ್ ವಾಡಿಯಾ ‘ರಾಹುಲ್ ಹೊರತಾಗಿಯೂ ತಂಡದಲ್ಲಿ ಬೇರೆ ಆಟಗಾರರಿದ್ದಾರೆ. ಒಬ್ಬರಿಂದ ತಂಡವಾಗಿಲ್ಲ.