ಮುಂಬೈ: ಜಿಂಬಾಬ್ವೆ ಪ್ರವಾಸ ಮಾಡಲಿರುವ ಟೀಂ ಇಂಡಿಯಾಗೆ ಶಿಖರ್ ಧವನ್ ಬದಲು ಕೆಎಲ್ ರಾಹುಲ್ ನಾಯಕರಾಗಿ ದಿಡೀರ್ ನೇಮಕಗೊಂಡಿದ್ದಾರೆ.ಗಾಯಗೊಂಡಿದ್ದ ಕೆಎಲ್ ರಾಹುಲ್ ಚೇತರಿಸಿಕೊಂಡಿದ್ದು ಫಿಟ್ನೆಸ್ ಸಾಬೀತುಪಡಿಸಿದ ಹಿನ್ನಲೆಯಲ್ಲಿ ಅವರನ್ನು ಜಿಂಬಾಬ್ವೆ ಸರಣಿಗೆ ಆಯ್ಕೆ ಮಾಡಲಾಗಿದೆ. ಜೊತೆಗೆ ಈಗಾಗಲೇ ನಾಯಕನಾಗಿ ಘೋಷಿಸಲಾಗಿದ್ದ ಶಿಖರ್ ಧವನ್ ಗೆ ಉಪನಾಯಕನಾಗಿ ಹಿಂಬಡ್ತಿ ಕೊಡಲಾಗಿದ್ದು, ರಾಹುಲ್ ಗೆ ನಾಯಕತ್ವ ನೀಡಲಾಗಿದೆ.ಬಹಳ ದಿನಗಳಿಂದ ಕ್ರಿಕೆಟ್ ನಿಂದ ದೂರವಿರುವ ರಾಹುಲ್ ಗೆ ಏಷ್ಯಾ ಕಪ್ ಗೆ ತಯಾರಾಗಲು ಜಿಂಬಾಬ್ವೆ