ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನು 8 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದು ಟೀಂ ಇಂಡಿಯಾ ಆಂಗ್ಲರ ನಾಡಿನ ಪ್ರವಾಸವನ್ನು ಶುಭಾರಂಭ ಮಾಡಿದೆ. ಪಕ್ಕಾ ಮಾಸ್ ಶೈಲಿಯಲ್ಲಿ ಬ್ಯಾಟ್ ಬೀಸಿದ ಕನ್ನಡಿಗ ಕೆಎಲ್ ರಾಹುಲ್ ಕೇವಲ 54 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ಗಳೊಂದಿಗೆ 101 ರನ್ ಗಳಿಸಿದರು. ಈ ಮೂಲಕ ಹಲವು ದಿನಗಳಿಂದ ತಮಗೆ ಮರೀಚಿಕೆಯಾಗಿದ್ದ ಶತಕದ ಕನಸನ್ನು ಕೈಗೂಡಿಸಿಕೊಂಡರು. ಶತಕ ಸಿಡಿಸಿದ ತಕ್ಷಣ