ಬೆಂಗಳೂರು: ಕರ್ನಾಟಕ ಮೂಲದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಅಭಿಮಾನಿಯೊಬ್ಬರ ಓದಿಗೆ ನೆರವಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಸದ್ಯಕ್ಕೆ ಗಾಯದಿಂದಾಗಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೆಎಲ್ ರಾಹುಲ್ ಮಾನವೀಯತೆ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ.ಬಾಗಲಕೋಟೆಯ ಅಮೃತ ಮಾವಿನಕಟ್ಟಿ ಎಂಬ ಬಡ ವಿದ್ಯಾರ್ಥಿಯ ಓದಿಗೆ ರಾಹುಲ್ 75 ಸಾವಿರ ರೂ. ಕಳುಹಿಸುವ ಮೂಲಕ ನೆರವಾಗಿದ್ದಾರೆ. ರಾಹುಲ್ ಹಣ ಸಹಾಯ ಮಾಡಿದ್ದರಿಂದ ಇದೀಗ ಅಮೃತ್ ಹುಬ್ಬಳ್ಳಿಯ ಕೆಎಲ್ ಇ ಕಾಲೇಜಿನಲ್ಲಿ ಬಿ.ಕಾಂ