ಕೆಎಲ್ ರಾಹುಲ್ ಬಗ್ಗೆ ಸೆಹ್ವಾಗ್ ಹೇಳಿದ ಭವಿಷ್ಯ ನಿಜವಾಯ್ತು!

ನವದೆಹಲಿ| Krishnaveni K| Last Modified ಬುಧವಾರ, 4 ಜುಲೈ 2018 (08:44 IST)
ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕೆಎಲ್ ರಾಹುಲ್ ಐಪಿಎಲ್ ಆಡುವಾಗ ಮೆಂಟರ್ ಆಗಿದ್ದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇತ್ತೀಚೆಗೆ ನೀಡಿದ್ದ ಹೇಳಿಕೆಯೊಂದು ನಿಜವಾಗಿದೆ.

ರಾಹುಲ್ ರನ್ನು ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಆಡಿಸದೇ ಇದ್ದಾಗ ಆಕ್ರೋಶ ವ್ಯಕ್ತಪಡಿಸಿದ್ದ ಸೆಹ್ವಾಗ್, ರಾಹುಲ್ ರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿ, ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು. ರಾಹುಲ್ ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಆಡಬಲ್ಲರು ಎಂದಿದ್ದರು.ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ರಾಹುಲ್ ಮೂರನೇ ಕ್ರಮಾಂಕದಲ್ಲಿ ಇಳಿದು ಅಬ್ಬರಿಸಿದ್ದು ನೋಡಿದರೆ ಸೆಹ್ವಾಗ್ ಭವಿಷ್ಯ ನಿಜವಾಗಿದೆ. ನಿನ್ನೆ ರಾಹುಲ್ ಮೂರನೆಯವರಾಗಿ ಕಣಕ್ಕಿಳಿದರೆ, ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.

ಸೆಹ್ವಾಗ್ ನುಡಿದಂತೇ ರಾಹುಲ್ ಸಿಡಿದರು. ಅದೆಷ್ಟೋ ದಿನಗಳ ನಂತರ ಶತಕವೊಂದನ್ನು ಭಾರಿಸಿದರು. ಎರಡು ವರ್ಷಗಳ ಬಳಿಕ ವಿದೇಶದಲ್ಲಿ ಶತಕ ಸಿಡಿಸಿದ ದಾಖಲೆ ಮಾಡಿದರು. ಅಷ್ಟೇ ಅಲ್ಲದೆ, ಅತೀ ವೇಗವಾಗಿ (13 ಇನಿಂಗ್ಸ್ ಗಳಿಂದ) ಟಿ20 ಕ್ರಿಕೆಟ್ ನಲ್ಲಿ 500 ರನ್ ಗಳಿಸಿದ ದಾಖಲೆ ಮಾಡಿದರು.ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :