ಮುಂಬೈ: ಸೀಮಿತ ಓವರ್ ಗಳಲ್ಲಿ ಟೀಂ ಇಂಡಿಯಾಗೆ ಧೋನಿ ನಂತರ ವಿಕೆಟ್ ಕೀಪರ್ ಯಾರು ಎನ್ನುವುದಕ್ಕೆ ಉತ್ತರ ಸಿಕ್ಕಿಲ್ಲ. ಎಷ್ಟೇ ಅವಕಾಶ ಕೊಟ್ಟರೂ ರಿಷಬ್ ಪಂತ್ ವಿಫಲವಾಗುತ್ತಿರುವುದರಿಂದ ಟೀಂ ಇಂಡಿಯಾ ಚಿಂತಕರ ಚಾವಡಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ವಿಕೆಟ್ ಕೀಪರ್ ಜವಾಬ್ಧಾರಿ ನೀಡಲು ತಂಡ ಚಿಂತನೆ ನಡೆಸಿದೆ. ದೇಶೀಯ ಕ್ರಿಕೆಟ್ ನಲ್ಲಿ ಕರ್ನಾಟಕ ಪರ ವಿಕೆಟ್ ಕೀಪರ್ ಆಗಿಯೂ ಕರ್ತವ್ಯ ನಿಭಾಯಿಸುವ