ಕೆಎಲ್ ರಾಹುಲ್ ಬದಲು ರೋಹಿತ್ ಶರ್ಮಾಗೆ ಸ್ಥಾನ: ಆಯ್ಕೆ ಸಮಿತಿ ಮುಖ್ಯಸ್ಥರಿಂದಲೇ ಬಂತು ಸೂಚನೆ

ಮುಂಬೈ, ಗುರುವಾರ, 12 ಸೆಪ್ಟಂಬರ್ 2019 (09:25 IST)

ಮುಂಬೈ: ಟೀಂ ಇಂಡಿಯಾ ಏಕದಿನ ತಂಡದಲ್ಲಿ ಫಾರ್ಮ್ ಸಮಸ್ಯೆಯಿಂದಾಗಿ ಹೆಚ್ಚು ಕಡಿಮೆ ಸ್ಥಾನ ಕಳೆದುಕೊಂಡಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಈಗ ಟೆಸ್ಟ್ ತಂಡದಲ್ಲೂ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಕೆಲವು ದಿನಗಳಿಂದ ಮಾತು ಕೇಳಿಬರುತ್ತಿತ್ತು.


 
ಅದೀಗ ನಿಜವಾಗುವ ಲಕ್ಷಣ ತೋರಿಬರುತ್ತಿದೆ. ರಾಹುಲ್ ಟೆಸ್ಟ್ ನಲ್ಲೂ ಸ್ಥಿರ ಪ್ರದರ್ಶನ ನೀಡದೇ ಇರುವುದರಿಂದ ಅವರ ಬದಲು ರೋಹಿತ್ ಶರ್ಮಾರನ್ನು ಆರಂಭಿಕರಾಗಿ ಕಣಕ್ಕಿಳಿಸುವ ಆಯ್ಕೆಯೂ ನಮ್ಮ ಮುಂದಿದೆ ಎಂದು ಸ್ವತಃ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಸುಳಿವು ನೀಡಿದ್ದಾರೆ.
 
ಇದರಿಂದಾಗಿ ಮುಂಬರುವ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಕೆಎಲ್ ರಾಹುಲ್ ಆಯ್ಕೆಯಾದರೂ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಈಗಾಗಲೇ ಮಾಜಿ ನಾಯಕ ಸೌರವ್ ಗಂಗೂಲಿ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡಾ ರಾಹುಲ್ ಬದಲಿಗೆ ರೋಹಿತ್ ರನ್ನು ಆರಂಭಿಕರಾಗಿ ಕಣಕ್ಕಿಳಿಸಬಹುದು ಎಂದಿದ್ದರು. ಹೀಗಾಗಿ ರಾಹುಲ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅನುಷ್ಕಾ ಜತೆ ಶರ್ಟ್ ಇಲ್ಲದೆ ಪೋಸ್ ನೀಡಿದ ವಿರಾಟ್ ಫೋಟೋ ವೈರಲ್

ಕ್ರಿಕೆಟ್ ಬ್ಯುಸಿ ಶೆಡ್ಯುಲ್ ನಡುವೆಯೇ ಸಮಯ ಸಿಕ್ಕಾಗ ಅನುಷ್ಕಾ ಜತೆ ವಿರಾಟ್ ಕೊಹ್ಲಿ ಸಮಯ ಕಳೆಯುತ್ತಿದ್ದು, ...

news

ಕೊನೆಗೂ ರೋಹಿತ್ ಶರ್ಮಾ-ಕೊಹ್ಲಿ ನಡುವಿನ ಭಿನ್ನಾಭಿಪ್ರಾಯ ಒಪ್ಪಿಕೊಂಡ ಕೋಚ್ ರವಿಶಾಸ್ತ್ರಿ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಆಂತರಿಕ ತಿಕ್ಕಾಟವಿದೆ ಎಂದು ...

news

ಶ್ರೀಲಂಕಾ ಕ್ರಿಕೆಟಿಗರ ಪ್ರವಾಸ ತಡೆ ಹಿಡಿದಿದ್ದು ಭಾರತವಂತೆ! ಪಾಕ್ ಸಚಿವನ ಹೇಳಿಕೆ

ಇಸ್ಲಾಮಾಬಾದ್: ಶ್ರೀಲಂಕಾ ಕ್ರಿಕೆಟಿಗರು ಪಾಕಿಸ್ತಾನದಲ್ಲಿ ನಡೆಯಲಿರುವ ಏಕದಿನ ಸರಣಿಗೆ ತೆರಳದಂತೆ ...

news

ಟೀಂ ಇಂಡಿಯಾ ಕ್ರಿಕೆಟಿಗರ ಚಿಂತೆ ಹೆಚ್ಚಿಸಲಿದೆ ಕೋಚ್ ರವಿಶಾಸ್ತ್ರಿ ಈ ನಿರ್ಧಾರ!

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇತ್ತೀಚೆಗಿನ ದಿನಗಳಲ್ಲಿ ಫಿಟ್ನೆಸ್ ನದ್ದೇ ಸಮಸ್ಯೆ. ಯೋ ಯೋ ಟೆಸ್ಟ್ ...