Widgets Magazine

ಕೆಎಲ್ ರಾಹುಲ್ ಅಂದು ಮೌನವಾಗಿದ್ದು ಯಾಕೆ?!

ವೆಲ್ಲಿಂಗ್ಟನ್| Krishnaveni K| Last Modified ಭಾನುವಾರ, 2 ಫೆಬ್ರವರಿ 2020 (08:58 IST)
ವೆಲ್ಲಿಂಗ್ಟನ್: ಕೆಎಲ್ ರಾಹುಲ್ ತಮ್ಮ ಜೀವನದಲ್ಲಿ ಅತ್ಯಂತ ಕೆಟ್ಟ ಗಳಿಗೆಯಾಗಿದ್ದ ಕಾಫಿ ವಿತ್ ಕರಣ್ ಶೋ ಬಗ್ಗೆ ಮತ್ತೆ ಮಾತನಾಡಿದ್ದಾರೆ.

 
ಸಂದರ್ಶನವೊಂದರಲ್ಲಿ ಆ ದಿನಗಳನ್ನು ಸ್ಮರಿಸಿಕೊಂಡ ಕೆಎಲ್ ರಾಹುಲ್ ಆ ಕ್ಷಣದಲ್ಲಿ ನಾನು ಮೌನಿಯಾದೆ. ನನಗೆ ಆಗ ಏನೂ ಬೇಕೆನಿಸುತ್ತಿರಲಿಲ್ಲ. ಕ್ರಿಕೆಟ್ ಒಂದೇ ನನಗೆ ಆ ಕಹಿ ಅನುಭವವನ್ನು ಮರೆಯಲು ಸಹಾಯ ಮಾಡಿದ್ದು. ಅಪ್ಪ-ಅಮ್ಮನಿಗೂ ಸಮಾಜ ಇದನ್ನು ಹೇಗೆ ಸ್ವೀಕರಿಸಬಹುದು ಎಂಬ ಆತಂಕವಿತ್ತು’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
 
ಆ ಘಟನೆ ಬಳಿಕ ಎಚ್ಚೆತ್ತುಕೊಂಡ ರಾಹುಲ್ ತಮ್ಮ ವೃತ್ತಿ ಬದುಕನ್ನು ಉತ್ತಮವಾಗಿ ಕಟ್ಟಿಕೊಂಡರು. ಈಗ ಟೀಂ ಇಂಡಿಯಾಕ್ಕೆ ವಿಕೆಟ್ ಕೀಪರ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ರಾಹುಲ್ ಅನಿವಾರ್ಯ ಆಟಗಾರನಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :