ನವದೆಹಲಿ: ಈ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ಕರ್ನಾಟಕ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಕೋಚ್ ವೀರೇಂದ್ರ ಸೆಹ್ವಾಗ್ ಗೆ ಯಶಸ್ಸಿನ ಪೂರ್ಣ ಕ್ರೆಡಿಟ್ ಕೊಟ್ಟಿದ್ದಾರೆ.ಈ ಐಪಿಎಲ್ ನಲ್ಲಿ ಅದ್ಭುತವಾಗಿ ಆಡಿದ್ದ ರಾಹುಲ್ ಕೋಚ್ ಸೆಹ್ವಾಗ್ ನಮಗೆ ಕೊಟ್ಟ ಸ್ವಾತಂತ್ರ್ಯದಿಂದ ಈ ರೀತಿ ಆಡಲು ಸಾಧ್ಯವಾಯಿತು ಎಂದಿದ್ದಾರೆ.ಸೆಹ್ವಾಗ್ ನಮಗೆ ಯಾವತ್ತೂ ಫಲಿತಾಂಶದ ಬಗ್ಗೆ ಒತ್ತಡ ಹೇರುತ್ತಿರಲಿಲ್ಲ. ಫೀಲ್ಡಿಗೆ ಹೋಗಿ ಒತ್ತಡವಿಲ್ಲದೇ ನಗುಮೊಗದಿಂದ ನಿಮ್ಮ ನ್ಯಾಚುರಲ್ ಗೇಮ್