ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಬಗ್ಗೆ ಕೆಎಲ್ ರಾಹುಲ್ ಮಾತನಾಡಿದ್ದಾರೆ.ನ್ಯೂಜಿಲೆಂಡ್ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಟಿ20 ಸರಣಿಗೆ ಮುನ್ನ ರಾಹುಲ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಕೂಲ್ ಆಗಿರುವ ನಾಯಕ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೊತೆ ಕೆಲಸ ಮಾಡುವುದೇ ಖುಷಿ ಎಂದಿದ್ದಾರೆ.ದ್ರಾವಿಡ್ ಗರಡಿಯಲ್ಲಿ ಭಾರತ ಎ ತಂಡದಲ್ಲಿ ಆಡಿ ಅನುಭವವಿರುವ ಕೆಎಲ್ ರಾಹುಲ್ ಅವರನ್ನು ತಮ್ಮ ಗುರು ಎಂದೇ ಪರಿಗಣಿಸುತ್ತಾರೆ.