ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಉಪನಾಯಕ ಕೆಎಲ್ ರಾಹುಲ್ ತಮ್ಮ ಫಾರ್ಮ್ ಕುರಿತಾದ ಕಳವಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.ಆರಂಭಿಕರಾಗಿ ಮತ್ತಷ್ಟು ಸುಧಾರಿಸಲು ತಾವು ಪ್ರಯತ್ನಿಸುತ್ತಿರುವುದಾಗಿ ಕೆಎಲ್ ರಾಹುಲ್ ಈ ವೇಳೆ ಹೇಳಿಕೊಂಡಿದ್ದಾರೆ. ಈ ಮೊದಲು ನಾಯಕ ರೋಹಿತ್ ಶರ್ಮಾ ಕೆಎಲ್ ರಾಹುಲ್ ಆರಂಭಿಕರಾಗಿಯೇ ಮುಂದುವರಿಯುತ್ತಾರೆ ಎಂದು ಸುಳಿವು ನೀಡಿದ್ದರು.‘ಟೀಕೆಗಳು ನಮಗೆ ಹೊಸತಲ್ಲ. ನೀವು ಹೊರಗಿನಿಂದ ನಮ್ಮ ಬಗ್ಗೆ ಟೀಕೆ ಮಾಡುವುದಕ್ಕಿಂತ ಹೆಚ್ಚು ನಾವು ಡ್ರೆಸ್ಸಿಂಗ್ ರೂಂ