ಮುಂಬೈ: ಪ್ರಸಕ್ತ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಅಭಿಮಾನಿಗಳ ಪ್ರೀತಿಗೆ ಪಾತ್ರಾಗಿರುವುದಷ್ಟೇ ಅಲ್ಲ, ಹೊಸದೊಂದು ದಾಖಲೆ ಬರೆದಿದ್ದಾರೆ.ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ರಾಹುಲ್, ಕ್ರಿಸ್ ಗೇಲ್ ಜತೆಗೆ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಐಪಿಎಲ್ ಸೀಸನ್ ನಲ್ಲಿ ಕಿಂಗ್ಸ್ ಇಲೆವೆನ್ ಪರ ಒಟ್ಟು 10 ಬಾರಿ ಅರ್ಧಶತಕದ ಜತೆಯಾಟ ನಡೆದಿದೆ.ಇದರಲ್ಲಿ 9 ಬಾರಿ ರಾಹುಲ್ ಭಾಗಿಯಾಗಿದ್ದಾರೆ ಎನ್ನುವುದು ವಿಶೇಷ. ಒಟ್ಟಾರೆಯಾಗಿ ನೋಡಿದರೆ ಇದೊಂದು ದೊಡ್ಡ ಸಾಧನೆ.