Photo Courtesy: Twitterಮುಂಬೈ: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಬ್ಯಾಟಿಗ ಸೂರ್ಯಕುಮಾರ್ ಯಾದವ್ ಶತಕ ಗಳಿಸಿದ್ದಕ್ಕೆ ಕೆಎಲ್ ರಾಹುಲ್ ತುಳುವಿನಲ್ಲೇ ಕೊಂಡಾಡಿದ್ದಾರೆ!ಸೂರ್ಯ ಪತ್ನಿ ದೇವಿಶಾ ಶೆಟ್ಟಿ ಮೂಲತಃ ತುಳುವರು. ಕೆಎಲ್ ರಾಹುಲ್ ಕೂಡಾ ಮಂಗಳೂರು ಮೂಲದವರು. ಹೀಗಾಗಿ ಇಬ್ಬರೂ ಸೂರ್ಯ ಶತಕದ ಬಗ್ಗೆ ತುಳುವಿನಲ್ಲಿ ಹೊಗಳಿದ್ದಾರೆ.ಸೂರ್ಯ ಶತಕದ ಕ್ಷಣವನ್ನು ಸೆರೆ ಹಿಡಿದ ರಾಹುಲ್ ‘ಭಾರೀ ಲಾಯ್ಕ ಗೊಬ್ಬಿಯಾ’ (ತುಂಬಾ ಚೆನ್ನಾಗಿ ಆಡಿದೆ) ಎಂದು ಸೂರ್ಯ ಪತ್ನಿಯನ್ನು ಟ್ಯಾಗ್ ಮಾಡಿ ಹೊಗಳಿದ್ದಾರೆ.