ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಮೂರನೇ ಮತ್ತು ನಿರ್ಣಾಯಕ ಟಿ20 ಪಂದ್ಯ ನಡೆಯಲಿದೆ. ಅಂತೂ ಭಾರತದ ಸುದೀರ್ಘ ಆಫ್ರಿಕಾ ಪ್ರವಾಸಕ್ಕೆ ಇಂದು ತೆರೆ ಬೀಳಲಿದೆ. ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ, ಧೋನಿ ಸಿಡಿಯುವುದರೊಂದಿಗೆ ಕೆಳ ಕ್ರಮಾಂಕದ ಬ್ಯಾಟಿಂಗ್ ಹಳಿಗೆ ಬಂದಂತಾಗಿದೆ. ಆದರೆ ಆರಂಭಿರದ್ದೇ ಚಿಂತೆ. ಇದುವರೆಗೆ ಆರಂಭ ಉತ್ತಮವಾಗಿರಲೇ ಇಲ್ಲ.ರೋಹಿತ್ ಶರ್ಮಾ ಒಂದು ಪಂದ್ಯದಲ್ಲಿ ಶತಕ ಬಿಟ್ಟರೆ ಇನ್ಯಾವ ಪಂದ್ಯದಲ್ಲೂ ಚೆನ್ನಾಗಿ ಆಡಿಲ್ಲ. ಹೀಗಾಗಿ ನಿರ್ಣಾಯಕ