ನವದೆಹಲಿ: ನಿಮ್ಮ ಇಂಟರ್ನೆಟ್ ಪೇಜ್ ನಲ್ಲಿ ಗೂಗಲ್ ತೆರೆದ ಕೂಡಲೇ ಇಂದು ಕ್ರಿಕೆಟ್ ಆಡುವ ಚಿತ್ರವೊಂದು ಮೂಡಿ ಬರುತ್ತಿದೆ. ನಿನ್ನೆಯ ತನಕ ಹೋಳಿ ಹಬ್ಬದ ಚಿತ್ರವಿತ್ತು. ಇಂದು ಸಡನ್ ಆಗಿ ಕ್ರಿಕೆಟಿಗರ ಚಿತ್ರವೇಕೆ ಗೊತ್ತಾ?ಕಾರಣ ಇಂದು ಟೆಸ್ಟ್ ಕ್ರಿಕೆಟ್ ಆರಂಭವಾಗಿ 140 ವರ್ಷವಾಗಿದೆ. ಈ ಸಂಭ್ರಮದ ದಿನದಂದು ಗೂಗಲ್ ಈ ಚಿತ್ರ ತನ್ನ ಮುಖಪುಟದಲ್ಲಿ ಹಾಕಿಕೊಂಡು ಟೆಸ್ಟ್ ಕ್ರಿಕೆಟ್ ಗೆ ಗೌರವ ಸಲ್ಲಿಸುತ್ತಿದೆ. ಮಾರ್ಚ್ 15, 1877 ರಂದು ಆಸ್ಟ್ರೇಲಿಯಾ