ವಿಂಡೀಸ್ ಸರಣಿಗೆ ಧೋನಿ ಆಯ್ಕೆಯಾಗಲ್ಲ? ನಿವೃತ್ತಿ ಘೋಷಣೆ ಸಾಧ್ಯತೆ!

ಮುಂಬೈ, ಶನಿವಾರ, 13 ಜುಲೈ 2019 (09:18 IST)

ಮುಂಬೈ: ವಿಶ್ವಕಪ್ ಸೋಲಿನಿಂದ ಹೊರಬರುವ ಮೊದಲೇ ಟೀಂ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗೆ ಸಿದ್ಧವಾಗಬೇಕಿದೆ.


 
ಜುಲೈ 17 ಮತ್ತು 18 ರಂದು ಮುಂಬೈಯಲ್ಲಿ ಆಯ್ಕೆ ಸಮಿತಿ ಸಭೆ ನಡೆಯಲಿದ್ದು, ವಿಂಡೀಸ್ ಸರಣಿಗೆ ತಂಡ ಪ್ರಕಟಿಸಲಿದೆ. ಕೆಲವು ಮೂಲಗಳ ಪ್ರಕಾರ ಈ ಸರಣಿಗೆ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗುವುದು. ಜತೆಗೆ ಧೋನಿಯೂ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
 
ಒಂದು ವೇಳೆ ಧೋನಿ ಆಯ್ಕೆಯಾಗದೇ ಇದ್ದಲ್ಲಿ ನಿವೃತ್ತಿ ಹೇಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಕೂಡಾ ಧೋನಿ ನಿವೃತ್ತಿ ಬಗ್ಗೆ ತಮ್ಮಲ್ಲಿ ಏನೂ ಹೇಳಿಲ್ಲ ಎಂದಿದ್ದಾರೆ. ಹಾಗಾಗಿ 38 ವರ್ಷದ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನ ಮುಂದಿನ ನಡೆ ಏನೆಂಬುದು ನಿಗೂಢವಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ಸೋಲಿನ ಬಳಿಕವೂ ಮ್ಯಾಂಚೆಸ್ಟರ್ ನಲ್ಲಿಯೇ ಉಳಿದುಕೊಂಡಿರುವ ಟೀಂ ಇಂಡಿಯಾ

ಲಂಡನ್: ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಮೇಲೂ ಟೀಂ ಇಂಡಿಯಾ ಮ್ಯಾಂಚೆಸ್ಟರ್ ನಲ್ಲಿಯೇ ಉಳಿದುಕೊಂಡಿದ್ದು, ...

news

ವಿಶ್ವಕಪ್ ಸೋಲಿನ ಬಳಿಕ ಕೋಚ್ ರವಿಶಾಸ್ತ್ರಿ ಜತೆ ವಿರಾಟ್ ಕೊಹ್ಲಿ ಕಿತ್ತಾಟ?!

ಲಂಡನ್: ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ನಲ್ಲಿ ಸೋತ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೇರವಾಗಿ ...

news

ನಿವೃತ್ತಿ ಹೇಳಬೇಡ, ದೇಶಕ್ಕೆ ನಿನ್ನ ಅಗತ್ಯವಿದೆ! ಧೋನಿಗೆ ಲತಾ ಮಂಗೇಶ್ಕರ್ ಭಾವನಾತ್ಮಕ ಪತ್ರ

ಮುಂಬೈ: ಒಂದೆಡೆ ಧೋನಿ ನಿವೃತ್ತಿಯ ಮಾತು ಕೇಳಿಬರುತ್ತಿದ್ದರೆ ಇನ್ನೊಂದೆಡೆ ಅವರ ಅಪ್ಪಟ ಅಭಿಮಾನಿಗಳು ...

news

ಟೀಂ ಇಂಡಿಯಾ ಸೋಲಿನ ಬಳಿಕ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ನಡುವೆ ಮಾತು ಬಂದ್?!

ಲಂಡನ್: ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಆಘಾತದಲ್ಲಿರುವ ಟೀಂ ಇಂಡಿಯಾ ...