Photo Courtesy: Twitterನವದೆಹಲಿ: ಐಪಿಎಲ್ 2023 ರ ನಿನ್ನೆಯ ಡೆಲ್ಲಿ-ಬೆಂಗಳೂರು ಪಂದ್ಯದಲ್ಲಿ ವಿರಾಟ್ ಕೊಹ್ಲಿ-ಗಂಗೂಲಿ ಪರಸ್ಪರ ಹಸ್ತಾಲಾಘವ ಮಾಡುವ ಮೂಲಕ ಗಮನ ಸೆಳೆದರು.ಟೀಂ ಇಂಡಿಯಾ ನಾಯಕತ್ವ ವಿಚಾರದಲ್ಲಿ ಇಬ್ಬರ ನಡುವೆ ಶೀತಲ ಸಮರ ನಡೆದಿತ್ತು. ಇದಕ್ಕೆ ಮೊದಲು ನಡೆದಿದ್ದ ಬೆಂಗಳೂರು-ಡೆಲ್ಲಿ ಪಂದ್ಯದ ವೇಳೆ ಕೊಹ್ಲಿ ಗಂಗೂಲಿಯತ್ತ ದಿಟ್ಟಿಸಿ ನೋಡಿದ್ದಲ್ಲದೆ, ಪಂದ್ಯದ ಬಳಿಕ ಇಬ್ಬರೂ ಹಸ್ತಾಲಾಘವ ಮಾಡದೇ ಅಸಮಾಧಾನ ಹೊರಹಾಕಿದ್ದರು.ಆದರೆ ನಿನ್ನೆಯ ಪಂದ್ಯದಲ್ಲಿ ಇಬ್ಬರೂ ಮನಸ್ತಾಪ ಮರೆತು ಹಸ್ತಾಲಾಘವ ಮಾಡಿದ್ದಾರೆ. ಡೆಲ್ಲಿ