ಕೃನಾಲ್ ಪಾಂಡ್ಯಗೆ ಕೊರೋನಾ: ಇಂದಿನ ಟಿ20 ಪಂದ್ಯ ದಿಡೀರ್ ರದ್ದು

ಕೊಲೊಂಬೋ| Krishnaveni K| Last Modified ಮಂಗಳವಾರ, 27 ಜುಲೈ 2021 (16:47 IST)
ಕೊಲೊಂಬೋ: ಟೀಂ ಇಂಡಿಯಾ ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ನಡೆಯಬೇಕಿದ್ದ ದ್ವಿತೀಯ ಟಿ20 ಪಂದ್ಯ ದಿಡೀರ್ ರದ್ದಾಗಿದೆ.

 
ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಕೃನಾಲ್ ಗೆ ಕೊರೋನಾ ದೃಢಪಟ್ಟಿದ್ದು, ಭಾರತ ಮತ್ತು ಶ್ರೀಲಂಕಾ ಎರಡೂ ತಂಡಗಳನ್ನೂ ಕ್ವಾರಂಟೈನ್ ಗೊಳಪಡಿಸಲಾಗಿದೆ.
 
ಕೃನಾಲ್ ಜೊತೆಗಿದ್ದ ಕ್ರಿಕೆಟಿಗರನ್ನೂ ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತಿದೆ. ಇಂದಿನ ಪಂದ್ಯವನ್ನು ಯಾವಾಗ ನಡೆಸಲಾಗುತ್ತದೆ ಎಂಬುದು ಇನ್ನೂ ಧೃಢಪಟ್ಟಿಲ್ಲ. ಸದ್ಯಕ್ಕೆ ಎರಡೂ ತಂಡಗಳಲ್ಲಿ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದೆ.




ಇದರಲ್ಲಿ ಇನ್ನಷ್ಟು ಓದಿ :