ಪುಣೆ: ಇತ್ತೀಚೆಗೆ ಟೀಂ ಇಂಡಿಯಾ ಬೌಲರ್ ಕುಲದೀಪ್ ಯಾದವ್-ಯಜುವೇಂದ್ರ ಚಾಹಲ್ ಗಳ ಕಳಪೆ ಫಾರ್ಮ್ ನಿಂದಾಗಿ ಸೀಮಿತ ಓವರ್ ಗಳ ಪಂದ್ಯದಲ್ಲಿ ಸಂಕಷ್ಟ ಅನುಭವಿಸುತ್ತಿದೆ.ಕುಲ್-ಚಾ ಎಂದೇ ಖ್ಯಾತರಾಗಿರುವ ಈ ಜೋಡಿ ಒಟ್ಟಿಗೇ ಪಂದ್ಯದಲ್ಲಿ ಕಾಣಿಸಿಕೊಳ್ಳದೇ ಎಷ್ಟೋ ದಿನಗಳೇ ಆಗಿವೆ. ಆದರೆ ಒಬ್ಬರಲ್ಲಾ ಒಬ್ಬರು ತಂಡದಲ್ಲಿ ಅವಕಾಶ ಪಡೆದರೂ ಇಬ್ಬರಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬಂದಿಲ್ಲ.ಧೋನಿ ನಾಯಕರಾಗಿದ್ದಾಗ ಮತ್ತು ವಿಕೆಟ್ ಕೀಪರ್ ಆಗಿ ವಿಕೆಟ್ ಹಿಂದುಗಡೆಯಿದ್ದಾಗ ಇಬ್ಬರೂ ಬೌಲರ್ ಗಳು ಅದ್ಭುತ ಪ್ರದರ್ಶನ