ಕೋಲ್ಕೊತ್ತಾ: ಟೀಂ ಇಂಡಿಯಾಕ್ಕೆ ಇಂದು ಅದೇನು ಕೆಟ್ಟ ಗಳಿಗೆಯೋ. ಆರಂಭದಲ್ಲೇ ಮಳೆ ಶನಿಯಂತೆ ಕಾಡುತ್ತಿದ್ದ. ಪಂದ್ಯ ಹಾಗೂ ಹೀಗೂ ಅರ್ಧ ದಿನ ಕಳೆದ ಮೇಲೆ ಆರಂಭವಾದರೂ, ಲಂಕಾದ ಲಕ್ಮಲ್ ಕಮಾಲ್ ಗೆ ಜುಜುಬಿ 17 ರನ್ ಗೆ ಪ್ರಮುಖ ಮೂರು ವಿಕೆಟ್ ಕಿತ್ತಿದ್ದಾರೆ. ಈ ಒದ್ದೆ ಪಿಚ್ ನಲ್ಲಿ ಬ್ಯಾಟಿಂಗ್ ನಡೆಸುವುದು ಕಷ್ಟವೇ. ತಾವು ಟಾಸ್ ಗೆದ್ದಿದ್ದರೂ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದು ನಾಯಕ ಕೊಹ್ಲಿ ಮೊದಲೇ ಹೇಳಿದ್ದರು.