ಕೋಲ್ಕೊತ್ತಾ: ಭಾರತ ವಿರುದ್ಧ ಶ್ರೀಲಂಕಾ ಗೆಲುವಿನ ಸ್ಥಿತಿಯಲ್ಲಿತ್ತು. ಆದರೆ ಕೊನೆಯ ಹಂತದಲ್ಲಿ ಸೋಲುವ ಹಂತಕ್ಕೆ ಬಂದಿದ್ದು ನಿಜಕ್ಕೂ ಆ ತಂಡಕ್ಕೆ ಆಘಾತ ನೀಡಿತ್ತು. ಈ ಆಘಾತದ ನಡುವೆ ಸೋಲು ತಪ್ಪಿಸಿಕೊಳ್ಳಲು ಶ್ರೀಲಂಕಾ ನಾಯಕ ದಿನೇಶ್ ಚಂಡಿಮಾಲ್ ನಾನಾ ನಾಟಕ ಮಾಡಿದರು. ಡಿಆರ್ ಎಸ್, ಫೇಕ್ ಫೀಲ್ಡಿಂಗ್ ನಂತರ ಲಂಕಾ ನಾಯಕನ ಈ ನಾಟಕ ಮತ್ತೊಮ್ಮೆ ಆ ತಂಡದ ಬಣ್ಣ ಬಯಲು ಮಾಡಿತು.ಗೆಲುವಿಗೆ 230 ರನ್ ಗಳ ಗುರಿ ಬೆನ್ನತ್ತಿದ್ದ