ಪಲ್ಲಿಕೆಲೆ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವುದು ಇದಕ್ಕೇ ಇರಬೇಕು. ಲಂಕಾ ಮತ್ತೊಮ್ಮೆ ಬಾಯಿಯವರೆಗೆ ಬಂದಿದ್ದ ಗೆಲುವಿನ ಅದೃಷ್ಟವನ್ನು ತಾನೇ ಕೈಚೆಲ್ಲಿತು.ಟೀಂ ಇಂಡಿಯಾ ಸೋಲುತ್ತಿದ್ದ ಪಂದ್ಯವನ್ನು ರೋಹಿತ್ ಶರ್ಮಾ-ಧೋನಿ ಆಟದಿಂದ ತನ್ನ ಜೋಳಿಗೆಗೆ ಸೇರಿಸಿಕೊಂಡಿತು. ಅತ್ತ ರೊಚ್ಚಗೆದ್ದ ಲಂಕಾ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಕೈಗೆ ಸಿಕ್ಕಿದ ವಸ್ತುಗಳನ್ನು ಮೈದಾನಕ್ಕೆ ತೂರಲು ಪ್ರಾರಂಭಿಸಿದಾಗ ಆಟ ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಕೊನೆಗೆ ಪ್ರೇಕ್ಷಕರು ಆಕ್ರೋಶದಿಂದ ಪಂದ್ಯ ಮುಗಿಯುವ ಮೊದಲೇ ಮೈದಾನ ಬಿಟ್ಟು