ಕೊಲೊಂಬೋ: ಏಷ್ಯಾ ಕಪ್ ಆಡಲು ಶ್ರೀಲಂಕಾದಲ್ಲಿರುವ ವಿರಾಟ್ ಕೊಹ್ಲಿಗೆ ಲಂಕಾ ಯುವ ಕ್ರಿಕೆಟಿಗರೊಬ್ಬರು ಬೆಳ್ಳಿಯ ಬ್ಯಾಟ್ ಉಡುಗೊರೆಯಾಗಿ ನೀಡಿದ್ದಾರೆ.ಕೊಹ್ಲಿ ಲಂಕಾದ ಸ್ಥಳೀಯ ಕ್ರಿಕೆಟಿಗರೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಸ್ಥಳೀಯ ಕ್ರಿಕೆಟಿಗ ಕೃಶಾಂತ್ ಎಂಬವರು ಅವರಿಗೆ ಬೆಳ್ಳಿಯ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆ ನೀಡಿದ ಕೊಹ್ಲಿ ನಿಜಕ್ಕೂ ಮನಸೋತಿದ್ದಾರೆ.ಏನಿದರ ವಿಶೇಷತೆ ಗೊತ್ತಾ? ಈ ಬೆಳ್ಳಿಯ ಬ್ಯಾಟ್ ನಲ್ಲಿ ಕೊಹ್ಲಿ ಇದುವರೆಗೆ ಸಿಡಿಸಿರುವ ಎಲ್ಲಾ ಶತಕಗಳ ವಿವರಗಳನ್ನು ಕೆತ್ತಲಾಗಿದೆ.