ಕೊಲೊಂಬೋ: ಭಾರತದ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಟೆಸ್ಟ್ ಸರಣಿ ಮುಗಿದ ಬಳಿಕ ಏಕದಿನ ಸರಣಿ ಅಗ್ನಿ ಪರೀಕ್ಷೆ ಎದುರಿಸಬೇಕಾಗಿದೆ. ಟೆಸ್ಟ್ ಸೋಲಿನ ಬಳಿಕ ಲಂಕಾ ತಂಡದ ನಾಯಕತ್ವದಲ್ಲಿ ಬದಲಾವಣೆಯಾಗಿದೆ. ಟೀಂ ಇಂಡಿಯಾ ವಿರುದ್ಧ ಏಕದಿನ ಸರಣಿ ಆಡಲಿರುವ ಲಂಕಾ ತಂಡಕ್ಕೆ ಉಪುಲ್ ತರಂಗಾ ಸ್ಥಾನದಲ್ಲಿ ತಿಸಾರಾ ಪೆರೇರಾ ನಾಯಕನಾಗಿ ಆಯ್ಕೆಯಾಗಿದ್ದಾರೆ.ಚಂಡಿಮಾಲ್ ರಿಂದ ತೆರವಾದ ಏಕದಿನ ತಂಡದ ನಾಯಕತ್ವ ತರಂಗಾ ಪಾಲಾಗಿತ್ತು.